ಬಕ್ಕಾರಿಯ ಕೋರ್ತಾಲೆನ್ಸಿಸ್ Muell.-Arg. - ಯೂಫೊರ್ಬಿಯೇಸಿ

Synonym : ಪಿಯೆರಾರ್ಡಿಯ ಕೋರ್ತಾಲೆನ್ಸಿಸ್ Wt.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ.ವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಸಾಮಾನ್ಯವಾಗಿ ನಯವಾಗಿರುತ್ತದೆ; ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ,ಪರ್ಯಾಯ ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ಕಾವಿನೆಲೆಗಳು ಅಂಡಾಕಾರದಲ್ಲಿದ್ದು ಚೂಪಾಗಿರುತ್ತವೆ ಹಾಗೂ ರೋಮಸಹಿತವಾಗಿರುತ್ತವೆ;ತೊಟ್ಟುಗಳು 1.2 - 3.8 ಸೆಂ.ಮೀ. ವರೆಗಿನ ಉದ್ದವಿದ್ದು, ದುಂಡಾಗಿದ್ದು ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ ಮತ್ತು ಎಳೆಯದಾಗಿದ್ದಾಗ ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿರುತ್ತವೆ ; ಪತ್ರಗಳು 7.5 -17.8 X3 -7.6 ಸೆಂ ಮೀ. ಗಾತ್ರ, ಬುಗುರಿ-ಭರ್ಜಿಯ ಆಕಾರ, ಮೊಂಡಾಗ್ರವುಳ್ಳ ಬಾಲ ರೂಪಿ - ಕ್ರಮೇಣ ಚೂಪಾಗುವ ಮಾದರಿಯ ತುದಿ, ಬೆಣೆಯಾಕಾರದ ಬುಡ, ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತ ವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 4 - 8 ಜೋಡಿಗಳಿದ್ದು ಆರೋಹಣ ಮಾದರಿಯಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು ,ಹೆಚ್ಚಿನ ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತಹ ಮಾದರಿಯವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿರುವ ಪುಷ್ಪದಳ ರಹಿತ ಏಕಲಿಂಗಿ ಹೂಗಳುಳ್ಳ ಕದಿರುಮಂಜರಿಗಳಲ್ಲಿರುತ್ತವೆ;ಹೆಣ್ಣು ಹೂಗಳು ಸಂಕ್ಷೇಪಗೊಂಡ ಕದಿರು ಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಕಡುಗೆಂಪು ಬಣ್ಣದವುಗಳಾಗಿದ್ದು,ಗೋಳಾಕಾರದಲ್ಲಿದ್ದು 1.5 ರಿಂದ 2.5 ಸೆಂ.ಮೀ. ಅಡ್ಡಗಳತೆ ಹೊಂದಿದ್ದು ಉಬ್ಬು-ತಗ್ಗುಳ್ಳ ಗರೆಗಳ ಸಮೇತವಿರುತ್ತವೆ ಹಾಗೂ ಎಳೆಯದಾಗಿದ್ದಾಗ ಮೃದುತುಪ್ಪಳವನ್ನು ಹೊಂದಿರುತ್ತವೆ; ಬೀಜಗಳು ಅಗಲವಾಗಿದ್ದು ಸಂಕುಚಿತವಾಗಿರುತ್ತವೆ ಮತ್ತು ಮಾಂಸಲವಾದ ಪತ್ರೆಗಳ ಸಮೇತವಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ಕಡಿಮೆ ಮತ್ತು ಮಧ್ಯಮ (1000ಮೀ.) ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳು.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ (ಕೊಡಗು ಪ್ರದೇಶದವರೆಗೆ) ವ್ಯಾಪಿಸಿದೆ.

ಗ್ರಂಥ ಸೂಚಿ :

DC., Prodr. 144459.1857; Gamble, Fl. Madras 2:1310.1993 (rep.ed.); Sasidharan, Biodiversity documentation for Kerala – Flowering plants, part 6, 410.2004;Saldanha, 2: 118.1996.

Top of the Page