ಕಾರ್ಯೋಟ ಯುರೆನ್ಸ್ L. - ಅರೆಕೇಸಿ

ಕನ್ನಡದ ಪ್ರಾದೇಶಿಕ ಹೆಸರು : ಬಗನಿ, ಬೈನಿ, ಬೇನಿ, ಕೊಂಡಪನ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15ಮೀ ಎತ್ತರದವರೆಗೆ ಬೆಳೆಯುವ ತಾಳೆ ಅಥವಾ ತೆಂಗು ಸಂಬಂಧಿ ಮರ.
ಕಾಂಡ ಮತ್ತು ತೊಗಟೆ : ಕಾಂಡ ನಯವಾಗಿದ್ದು ವಲಯಾಕಾರದ ಎಲೆಯುದುರಿದ ಗುರುತುಗಳ ಸಮೇತವಿರುತ್ತದೆ.
ಜಿನುಗು ದ್ರವ :
ಎಲೆಗಳು : ಎಲೆಗಳು ದ್ವಿಗರಿರೂಪಿ ಸಂಯುಕ್ತ ಎಲೆ ಮಾದರಿಯಲ್ಲಿದ್ದು 5ಮೀ ವರೆಗಿನ ುದ್ದ ಹೊಂದಿರುತ್ತದೆ; ಗರಿಗಳು 5 ರಿಂದ 7ಜೋಡಿಗಳಿದ್ದು 1.5 ಮೀ ನವರೆಗಿನ ಉದ್ದ ಹೊಂದಿರುತ್ತದೆ, ಕಿರು ಎಲೆಗಳ ಪತ್ರ 25ಸೆಂ.ಮೀ. ಉದ್ದ ಹಾಗೂ 10ಸೆಂ.ಮೀ. ಅಗಲವಾಗಿರುತ್ತದೆ. ಹಾಗೂ ಬೆಣೆಯಾಕಾರವನ್ನು ಹೊಂದಿರುತ್ತದೆ. ಕಿರು ಎಲೆಗಳ ಪತ್ರದ ತುದಿ ಮುರಿದು ಹಾಕಿದ ಕೊನೆಯಂತೆ ತೋರುತ್ತದೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಹೊಂಬಾಳೆ ಮಂಜರಿ ಮಾದರಿಯವು ಹಾಗೂ ಕಿರುಗಾತ್ರವುಳ್ಳ ಮತ್ತು ಹೆಚ್ಚಾಗಿ ಕವಲೊಡೆದ ಮಂಜರಿ ವೃಂತ ಹೊಂದಿರುತ್ತವೆ. ಆವರಣಪತ್ರಕಗಳು 3 ರಿಂದ 5; ಕಿರುಕದಿರು ಮಂಜರಿಗಳು ಕಿರುಕದಿರು ವೃಂತದ ಮೇಲೆ ದಟ್ಟವಾಗಿ ಅಳವಡಿಸಿರುತ್ತವೆ. ಹೂಗಳು ಏಕಲಿಂಗಿಗಳು.
ಕಾಯಿ /ಬೀಜ : ಕಾಯಿಗಳು ಬೆರ್ರಿ ಮಾದರಿಯವಾಗಿದ್ದು ತೊಟ್ಟು ಸಮೇತವಿರುತ್ತದೆ. ಆಕಾರದಲ್ಲಿ ಅಂಡಾಕಾರ ಅಥವಾ ಗುಂಡಾಕಾರವಾಗಿರುತ್ತದೆ. ಕಾಯಿಗಳು 1 ರಿಂದ 2 ಬೀಜ ಸಮೇತವಾಗಿರುತ್ತವೆ.

ಜೀವಪರಿಸ್ಥಿತಿ :

ಈ ಪ್ರಬೇಧ 1400 ಮೀ ಎತ್ತರದ ಪ್ರದೇಶಗಳ ತೆರೆದ ನಿತ್ಯಹರಿದ್ವರ್ಣ ಕಾಡು ಮತ್ತು ಅರೆನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ವ್ಯಾಪನೆ :

ಇಂಡೋಮಲೇಶಿಯಾ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತವೆ.

ಗ್ರಂಥ ಸೂಚಿ :

Sp. Pl. 1189.1753; Gamble, Fl. Madras 3: 1560.1998 (re.ed); Cooke, Fl. Bombay 2: 805. 1902; Sasidharan, Biodiversity documentation for Kerala- Flowering Plants, part 6: 506. 2004.

Top of the Page