ಎಲೆಯೋಕಾರ್ಪಸ್ ಸೆರ್ರೇಟಸ್ L. - ಎಲೆಯೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 18 ಮೀ. ಎತ್ತರದವರೆವಿಗೆ ಬೆಳೆಯುವ ಮರಗಳು
ಕಾಂಡ ಮತ್ತು ತೊಗಟೆ : ತೊಗಟೆ ಕಂದುಬಣ್ಣದಲ್ಲಿದ್ದು ನಯವಾಗಿರುತ್ತವೆ;ಕಚ್ಚು ಮಾಡಿದ ಜಾಗ ಕಿತ್ತಳೆ ಕೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಎಲೆಉದುರಿದ ಗುರುತು ಸಮೇತವಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಕಾವಿನೆಲೆಗಳು ಕಿರಿಗಾತ್ರದವು, ಭರ್ಜಿಯಾಕಾರ ಹೊಂದಿದ್ದು ಉದುರಿ ಹೋಗುವಂತಹವು;ತೊಟ್ಟುಗಳು 1.2 - 4 ಸೆಂ.ಮೀ. ಉದ್ದವಿದ್ದು ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ ಹಾಗೂ ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯ ಆಕಾರ ಹೊಂದಿರುತ್ತವೆ ಮತ್ತು ಪತ್ರವನ್ನು ಸಂಧಿಸುವ ಸ್ಥಳದಲ್ಲಿ ದಬ್ಬಳದಾಕಾರದ ಉಪಾಂಗ ಸಮೇತವಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು 5.5 – 12.5 X2. 5 –5 ಸೆಂ. ಮೀ. ಗಾತ್ರ, ಅಂಡವೃತ್ತದ ಆಕಾರ, ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ಮಾದರಿಯ ತುದಿ, ಚೂಪಾದ ಬುಡ , ಗರಗಸ ದಂತಿತ ಅಂಚು ,ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು ಮುಪ್ಪಾದಾಗ ಕೆಂಪು ಬಣ್ಣ ಹೊದಿರುತ್ತವೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 5- 9 ಕವಲೊಡೆಯುವ ಜೋಡಿಗಳಿದ್ದು ಪತ್ರದ ತಳಬಾಗದ ಅಕ್ಷಾಕಂಕುಳಿನಲ್ಲಿ ರೋಮರಹಿತವಾದ ಸಹಜೀವಿ ಗೂಡುಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತಹವು; ಮೇಲ್ದರ್ಜೆಯ ನಾಳಗಳ ಜಾಲಬಂಧ ನಾಳ ವಿನ್ಯಾಸ ತೆಳು ಹಾಗೂ ಸೂಕ್ಷ್ಮವಾಗಿರುತ್ತದೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಮದ್ಯಾಭಿಸರ ಮಾದರಿಯವು;ಪುಷ್ಪದಳಗಳು ಬಿಳಿ ಬಣ್ಣಹೊಂದಿದ್ದು, ಆಳವಾದ ಸೀಳಿಕೆಗಳ ಸಮೇತವಿರುತ್ತವೆ.;ಪರಾಗಾಶಯ ಸ್ಪಂದನಾಶೀಲ ರೋಮಗಳ ಸಹಿತವಾಗಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ಚತುರಸ್ರ ಅಥವಾ ಅಂಡಾಕಾರದಲ್ಲಿದ್ದು 2.5 ಸೆಂ ಮೀ.ಉದ್ದವಿರುತ್ತವೆ ಹಾಗೂ 3 – 4 ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1600 ವರೆಗಿನ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣದಿಂದ ಅರೆ- ನಿತ್ಯಹರಿದ್ವರ್ಣ ಕಾಡುಗಳ ಉಪಮೇಲ್ಛಾವಣಿ ಮರಗಳಾಗಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯ; ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ಗ್ರಂಥ ಸೂಚಿ :

Linnaeus, Sp. Pl. 515.1753;Gamble, Fl.Madras 1: 124.1997(rep.ed.);Sasidharan, Biodiversity documentation for Kerala- Flowering Plants,part 6, 64.2004: Saldanha, Fl. Karnataka 1:212. 1996.

Top of the Page