ಗಾರ್ಸೀನಿಯ ಇಂಡಿಕ (Thouars) Choisy - ಕ್ಲೂಸಿಯೇಸಿ

Synonym : ಬ್ರಿಂಡೋನಿಯ ಇಂಡಿಕ. Thouars

ಕನ್ನಡದ ಪ್ರಾದೇಶಿಕ ಹೆಸರು : ಕೋಕಮ್ ಮರ, ಮುರುಗಿನ ಹುಳಿ,ಮುಂತೆಹುಳಿ, ಮುರುಗಲ್

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣ,ನಯವಾದ ಮೇಲ್ಮೈ ಹೊಂದಿರುತ್ತದೆ; ಅತಿಬಲಿತ ತೊಗಟೆ ಸೀಳಿಕೆಗಳನ್ನು ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಅಡ್ಡವಾಗಿರುತ್ತವೆ;ಕಿರುಕೊಂಬೆಗಳು ಅಭಿಮುಖವಾಗಿ ಜೋಡಣೆಯಾಗಿದ್ದು,ಉಪ-ಕೋನಯುಕ್ತವಾಗಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಹೇರಳವಾಗಿದ್ದು, ಹಳದಿ ಬಣ್ಣ ಹೊಂದಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿ-ರುತ್ತವೆ;ಎಲೆತೊಟ್ಟು 0.7 ರಿಂದ 1.5 ಸೆಂ.ಮೀ ಉದ್ದವಾಗಿದ್ದು, ಸಪಾಟ ಪೀನಮಧ್ಯ ಆಕಾರ ಹೊಂದಿದ್ದು ರೋಮರಹಿತವಾಗಿರುತ್ತದೆ ಹಾಗೂ ಬುಡಭಾಗದಲ್ಲಿ ಲಘುವಾದ ಒರೆಕೋಶ ಸಮೇತವಾಗಿರುತ್ತವೆ; ಎಲೆಪತ್ರಗಳು 6 -12 X 1.5 – 4.3 ಸೆಂ.ಮೀ ಗಾತ್ರ ಹೊಂದಿದ್ದು, ಸಂಕುಚಿತ ಅಂಡವೃತ್ತದಿಂದ ಸಂಕುಚಿತ ಬುಗುರಿಯಾ-ಕಾರದವರೆಗಿನ ಆಕಾರ ಹೊಂದಿರುತ್ತವೆ; , ಎಲೆತುದಿ ಚೂಪಲ್ಲದ ಅಥವಾ ಚೂಪು – ಕ್ರಮೇಣ ಚೂಪಾಗುವ ಮಾದರಿಯದಾಗಿರುತ್ತವೆ, ಎಲೆಯ ಬುಡ ಚೂಪಾದ ಅಥವಾ ಒಳಬಾಗಿದ ತಳವುಳ್ಳ ರೀತಿಯದಾಗಿರುತ್ತದೆ, ಎಲೆಯ ಅಂಚು ಲಘುವಾಗಿ ತರಂಗಿತ-ವಾಗಿರುತ್ತವೆ, ಎಲೆಗಳು ಕಾಗದವನ್ನೋಲುವ ಅಥವಾ ಉಪ ತೊಗಲನ್ನೋಲುವ ರೀತಿಯಲ್ಲಿದ್ದು ರೋಮರಹಿತ-ವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು 4 ರಿಂದ 7 ಜೋಡಿಗಳಿದ್ದು ಅನೇಕ ಅಂತರ-ಎರಡನೇದರ್ಜೆಯ ನಾಳಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿರುವ ಮತ್ತು ತುದಿಯಲ್ಲಿರುವ ಗುಚ್ಛಗಳಲ್ಲಿರುತ್ತವೆ.; ಹೆಣ್ಣು ಹೂಗಳು ತುದಿಯಲ್ಲಿ ಅಥವಾ ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಬೆರ್ರಿ ಗಳು ಗೋಳಾಕಾರದಲ್ಲಿದ್ದು, ಹಾಗೂ ನಯವಾದ ಮೇಲ್ಮೈ ಹೊಂದಿದ್ದು,ಅನೇಕ ಬೀಜಗಳನ್ನು ಒಳಗೊಂಡಿರುತ್ತವೆ.

ಜೀವಪರಿಸ್ಥಿತಿ :

700 ಮೀ ಎತ್ತರದವರೆಗಿನ ಭಗ್ನಗೊಂಡ ನಿತ್ಯಹರಿದ್ವರ್ಣ ಕಾಡುಗಳ ಮತ್ತು ಉಪ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಪ್ರಭೇದ ಕಂಡುಬರುತ್ತದೆ..

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಸಸ್ಯ ಆಗಾಗ್ಗೆ ಮಧ್ಯ ಸಹ್ಯಾದ್ರಿಯ ಉತ್ತರ ಭಾಗದ ಪ್ರದೇಶಗಳಲ್ಲಿ ಕಾಣಿಸಿಕೊಂಡು ಕೊಂಕಣ ಕರಾವಳಿ ಪ್ರದೇಶಗಳವರೆವಿಗೂ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Candolle,Prodr. 1:561.1824;Gamble,Fl.Madras 1:73.1997(re.ed.); Sasidharan, Biodiversity documentation for Kerala-Flowering Plants, part 6:41.2004;Saldanha, Fl. Karnataka 1:206.1996;Cooke, Fl.Bombay 1: 73. 1902

Top of the Page