ಗ್ಲಿಪ್ಟೋಪೊಟಾಮ್ ಜೇಲಾನಿಕಮ್ Thw. - ಸೆಲಾಸ್ಟ್ರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ 5 ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು,ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟುಗಳು 0.3 ರಿಂದ 0.7 ಸೆಂ.ಮೀ ಉದ್ದವಿದ್ದು ರೋಮರಹಿತವಾಗಿರುತ್ತವೆ ಹಾಗೂಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ.;ಪತ್ರಗಳು 8-15 X 2.5-6.2 ಸೆಂ.ಮೀ ಗಾತ್ರ,ಅಂಡವೃತ್ತದಿಂದ ಸಂಕುಚಿತ ಅಂಡವೃತ್ತಾಕಾರದವರೆಗಿನ ಆಕಾರ, ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ಹಿಡಿದು ಬೆಣೆಯಾಕಾರವರೆಗಿನ ಬುಡವನ್ನು ಹೊಂದಿರುತ್ತವೆ;ಎಲೆಯ ಅಂಚು ಗರಗಸ ದಂತಿತ (ದಂತಗಳು ಬುಡಭಾಗದಿಂದ 1 ರಿಂದ 2.5 ಸೆಂ.ಮೀ ನಂತರ ಪ್ರಾರಂಭ ವಾಗುತ್ತವೆ )ಎಲೆಗಳು ಕಾಗದವನ್ನು ಹೋಲುವ ಮಾದರಿ ಯಲ್ಲಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಎಲೆಯ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 8 ಜೋಡಿಗಳಿದ್ದು ಸ್ಪಷ್ಟವಾಗಿ ಕಾಣುವಂತಿರುತ್ತವೆ;ಮೂರನೇ ದರ್ಜೆಯ ನಾಳಗಳು ತೀರಾ ತೆಳ್ಳಗಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ತೆಳು ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿದ್ದುಅಕ್ಷಾಕಂಕುಳಿನಲ್ಲಿರುವ ಅಥವಾ ಅಗ್ರಅಕ್ಷಸ್ಥ ಪಾರ್ಶ್ವ ಶಾಖೀಯ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ನಯವಾಗಿದ್ದು, 1 ರಿಂದ 4 ಕೋಣೆಗಳನ್ನು ಒಳಗೊಂಡಿರುತ್ತವೆ ಹಾಗೂ ಪತ್ರೆ(ಏರಿಲ್) ಸಮೇತವಿರುವ ಬೀಜಗಳನ್ನೊಳಗೊಡಿರುತ್ತವೆ.

ಜೀವಪರಿಸ್ಥಿತಿ :

500 ರಿಂದ 900 ಮೀ ಎತ್ತರದವರೆಗಿನ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಪ್ರದೇಶ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ಅಗಸ್ತ್ಯ ಮಲೈ, ಅಣ್ಣಾಮಲೈಮತ್ತು ಪಾಲಕ್ಕಾಡುಬೆಟ್ಟಗಳಲ್ಲಿ ಅಪರೂಪವಾಗಿ ಕಂಡುಬರುತ್ತದೆ.

ಸ್ಥಿತಿ :

ದುರ್ಬಲ ಸ್ಥಿತಿ (IUCN 2000)

Top of the Page