ಹೋಲಿಗಾರ್ನ ಫೆರ್ರುಜೀನಿಯ Marchand - ಅನಕಾರ್ಡಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡದಾದ ಈ ಮರಗಳು 35 ಮೀ ಎತ್ತರದವರೆವಿಗೆ ಬೆಳೆಯುತ್ತವೆ.
ಕಾಂಡ ಮತ್ತು ತೊಗಟೆ : ತೊಗಟೆಯ ಮೇಲ್ಮೈ ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಬಲಿಷ್ಟವಾಗಿದ್ದು,ಸೂಕ್ಷ್ಮಬೆಂಡು ಹೊರ ರಂಧ್ರ ಸಹಿತವಾಗಿದ್ದು, ರೋಮರಹಿತವಾಗಿರುತ್ತದೆ.
ಜಿನುಗು ದ್ರವ : ಸಸ್ಯಕ್ಷೀರ ಕಪ್ಪುಬಣ್ಣವುಳ್ಳದಾಗಿರುತ್ತದೆ
ಎಲೆಗಳು : ಎಲೆಗಳು ಸರಳ, ಪರ್ಯಾಯ – ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ.ಎಲೆತೊಟ್ಟು 1 ರಿಂದ 2 ಸೆಂ.ಮಿ.ಉದ್ದವಾಗಿದ್ದು, ಮೇಲ್ಭಾಗದಲ್ಲಿ ಚಪ್ಪಟ್ಟೆಯಾಗಿರುತ್ತದೆ. ಎಲೆತೊಟ್ಟುಗಳು ಸಾಮಾನ್ಯವಾಗಿ ಉದುರಿಹೋಗುವ, ಒಂದು ಜೋಡಿ ಚಾಚು ಚೀಲಗಳನ್ನು ಹೊಂದಿರುತ್ತದೆ.;ಎಲೆ ಪತ್ರ 10-27.5 x 2.5 – 8.5 ಸೆಂ.ಮಿ.ಗಾತ್ರವಿದ್ದು, ಬುಗುರಿ-ಈಟಿ ಸಮ್ಮಿಶ್ರಾಕಾರದಲ್ಲಿದ್ದು, ಕ್ರಮೇಣವಾಗಿ, ಕೊಂಚ ಚೂಪಾಗುವುದರಿಂದ ಹಿಡಿದು ಚೂಪಲ್ಲದ ಅಥವಾ ಗುಂಡಾಗಿರುವ ತುದಿಯನ್ನು ಹೊಂದಿರುತ್ತದೆ; ಬೆಣೆಯಾಕಾರದಿಂದ ಹಿಡಿದು ಕಾಂಡದವರೆಗೂ ವಿಸ್ತಾರಗೊಳ್ಳುವ ಪತ್ರದ ಬುಡಭಾಗವಿದ್ದು, ಹಿಂಸುರುಳಿ ಅಂಚನ್ನು ಹೊಂದಿರುವ ಪತ್ರಗಳು ತೊಗಲಿನ ಮೇಲ್ಮೈ ಹಾಗೂ ರೋಮರಹಿತವಾಗಿರುವುದಲ್ಲದೆ ತಳಭಾಗ ಒಣಗಿದಾಗ ಕಂದು ಬಣ್ಣದಲ್ಲಿರತ್ತದೆ.;ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ.;ಕ್ರಮೇಣವಾಗಿ ವಾಲಿರುವ 9 ರಿಂದ 14 ಜೋಡಿ ಎರಡನೇ ದರ್ಜೆಯ ನಾಳಗಳಿದ್ದು ಮೂರನೇ ದರ್ಜೆಯ ಜಾಲಬಂಧ ನಾಳವಿನ್ಯಾಸವುಳ್ಳದ್ದಗಿರುತ್ತದೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ತುದಿಯಲ್ಲಿದ್ದು, ಪುನರಾವ್ರುತ್ತಿಯಾಗಿ ಕವಲೊಡೆಯುವ ನಿಯತ ಮಧ್ಯಾಭಿಸರ ಮಾದರಿಯಲ್ಲಿದ್ದು,ತೆಳುನೀಲಿ ಮಿಶ್ರಿತ ಕಂದು ಬಣ್ಣದ ದಟ್ಟ ಮ್ಳುದುತುಪ್ಪಳವನ್ನು ಹೊಂದಿರುತ್ತದೆ. ಹೂಗಳು ಸಂಕೀರ್ಣ ಲಿಂಗಿಗಳು.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು ವಿಪರ್ಯ ಅಂಡಾಕಾರದಲ್ಲಿದ್ದು, ಒಂದು ಬೀಜವನ್ನೊಳಗೊಂಡು,ಹೈಪೋಕಾರ್ಪಿನಲ್ಲಿ ಸಂಪೂರ್ಣವಾಗಿ ಹುದುಗಿರುತ್ತದೆ.

ಜೀವಪರಿಸ್ಥಿತಿ :

ಸಮುದ್ರಮಟ್ಟದಿಂದ 1300 ಮೀ ಎತ್ತರದಲ್ಲಿನ ಕೊಂಚ ಅಥವ ಮಧ್ಯಮ ತೇವಾಂಶವುಳ್ಳ, ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಪ್ರಭೇಧ ಬೆಳೆಯುತ್ತದೆ.

ವ್ಯಾಪನೆ :

ಈ ಜಾತಿಯ ಮರಗಳು, ಪಶ್ಚಿಮ ಘಟ್ಟಕ್ಕೆ ಸೀಮಿತವಾಗಿದ್ದು , ದಕ್ಷಿಣ ಸಹ್ಯಾದ್ರಿ ಪ್ರದೇಶದಲ್ಲಿ ಅಪರೂಪವಾಗಿ ಹಾಗೂ ಮಧ್ಯ ಸಹ್ಯಾದ್ರಿಯ ಪ್ರದೇಶದಲ್ಲಿ ಸಾಧಾರಣವಾಗಿ ಬೆಳೆಯುತ್ತದೆ.

ಗ್ರಂಥ ಸೂಚಿ :

Rev.Anacard. 171.1869.; Gamble , Fl. Madras1:268.1997(re.ed.); Saldanha , Fl. Karnataka 2:205.1996; Sasidharan, Bidiversity documentation for Kerala-Flowering plants, part 6: 111.2004

Top of the Page