ಹೊಮಾಲಿಯಮ್ ಜೇಲಾನಿಕಮ್ (Gardner) Benth. - ಫ್ಲಕೋರ್ಶಿಯೇಸಿ

Synonym : ಬ್ಲ್ಯಾಕ್ವೆಲಿಯ ಜೇಲಾನಿಕ Gard.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಬೂದು ಬಣ್ಣ ಹೊಂದಿರುತ್ತದೆ;ಕಚ್ಚು ಮಾಡಿದ ಜಾಗ ಕಿತ್ತಳೆ ಬಣ್ಣದ ಸಣ್ಣ ಮಚ್ಚೆಗಳ ಸಮೇತವಿರುವ ಬಿಳಿ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು ದುಂಡಾಗಿರುತ್ತದೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಸಾಲಿನಲ್ಲಿರುತ್ತವೆ.ಕಾವಿನೆಲೆಗಳು ಉದುರಿ ಹೋಗುವ ಮಾದರಿಯವು; ತೊಟ್ಟುಗಳು 0.5-1.3 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ರೋಮರಹಿತವಾಗಿರುತ್ತವೆ ಹಾಗೂ ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊದಿರುತ್ತದೆ;ಪತ್ರಗಳು7.5-13X3.6-7.6 ಸೆಂ.ಮೀ.ಗಾತ್ರ ಹೊಂದಿದ್ದು ಅಂಡವೃತ್ತದ ಆಕಾರ ಹೊಂದಿದ್ದು,ಥಟ್ಟನೆ ಕ್ರಮೇಣ ಚೂಪಾಗುವ ತುದಿ,ಚೂಪಾದ ಅಥವಾ ದುಂಡಾದುದರಿಂದ ಉಪ-ಒಳಬಾಗಿದ ಬುಡ,ದುಂಡೇಣಿನ ದಂತವುಳ್ಳ ಅಂಚು ಹೊಂದಿರುತ್ತವೆ;ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 6-8 ಜೋಡಿಗಳಿದ್ದು ಕ್ರಮೇಣವಾಗಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಉದ್ದವಾಗಿದ್ದು ತೆಳುವಾದ ಕದಿರುಮಂಜರಿಯಲ್ಲಿ ವಿಚ್ಛಿನ್ನವಾಗಿ ಜೋಡಣೆಯಾದ ಸಣ್ಣ ಹೂಗಳನ್ನೊಳಗೊಂಡ ಗುಚ್ಛಗಳ ಸಮೇತವಾಗಿರುತ್ತವೆ; ಹೂಗಳು ಸಾಮಾನ್ಯವಾಗಿ ಹಸಿರು ಮಿಶ್ರಿತ ಬಿಳಿ ಬಣ್ಣದಲ್ಲಿದ್ದು ಕೆಲವೊಮ್ಮೆ ಅದೇ ಕದಿರು ಮಂಜರಿಯ ಕೆಲವು ಗುಚ್ಛಗಳು ಕಡುಗೆಂಪು ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಕಾಯಿಗಳು ಸಂಪುಟ ಫಲ ಮಾದರಿಯವು; ಬೀಜಗಳು ಅನೇಕವಿದ್ದು ಕಿರು ಗಾತ್ರ ಹೊಂದಿರುತ್ತವೆ ಮತ್ತು ಚತುರಸ್ರ ಅಥವಾ ಕೋನಯುಕ್ತವಾಗಿರುತ್ತವೆ.

ಜೀವಪರಿಸ್ಥಿತಿ :

900 ಮೀ. ಎತ್ತರದವರೆಗಿನ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳ ಉಪ- ಮೇಲ್ಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

J. Linn. Soc.Bot.4:35.1860;Gamble, Fl. Madras 1:522.1997 (Rep. Ed.) Sasidharan, Biodiversity documentation for Kerala- Flowering Plants, part 6 ,32. 2004;Saldanha, Fl.Karnataka 1:270.1996

Top of the Page