ಲಿಟ್ಸಿಯ ಕೇರಳಾನ Kosterm. - ಲಾರೇಸಿ

Synonym : ಲಿಟ್ಸಿಯ ಇನ್ಸೈನಿಸ್ Gamble

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ.ವರೆವಿಗೆ ಬೆಳೆಯುವ ,ಆನಿಕೆಗಳನ್ನುಳ್ಳ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಕಂದು ಬಣ್ಣದಲ್ಲಿರುತ್ತದೆ ಮತ್ತು ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ- ದುಂಡಾಗಿರುತ್ತವೆ ಮತ್ತು ತುಕ್ಕು ವರ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಇರುತ್ತವೆ; ತೊಟ್ಟುಗಳು 1.3-3 ಸೆಂ.ಮೀ. ಉದ್ದವಿದ್ದು ಮೇಲ್ಭಾಗದಲ್ಲಿ ಸ್ವಲ್ಪಮಟ್ಟಿಗೆ ಕಾಲುವೆಗೆರೆ ಸಮೇತವಿರುತ್ತದೆ ಮತ್ತು ತುಕ್ಕು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ ;ಪತ್ರಗಳು 11-2 7 X5-12.5 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ವಿಶಾಲವಾದ ಅಂಡವೃತ್ತದಿಂದ ಅಂಡವೃತ್ತ-ಬುಗುರಿಯವರೆಗಿನ ಆಕಾರ ಹೊಂದಿರುತ್ತವೆ ;ತುದಿ ಚೂಪಲ್ಲದುದರಿಂದ ದುಂಡಾದ ರೀತಿಯಲ್ಲಿದ್ದು ಬುಡ ಚೂಪಾಗಿ ಕೆಲವು ವೇಳೆ ದುಂಡಾಗಿರುತ್ತದೆ;ಅಂಚು ನಯವಾಗಿರುತ್ತದೆ; ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತದೆ;ಪತ್ರ ತಳಭಾಗ ಒಣಗಿದಾಗ ಕೆಂಪು ಮಿಶ್ರಿತ ಕಂದು ಬಣ್ಣದ -ಲ್ಲಿರುತ್ತದೆ; ಎಳೆಯದಾಗಿದ್ದಾಗ ಪತ್ರದ ತಳಭಾಗದ ನಾಳಗಳು ಮತ್ತು ಮಧ್ಯ ನಾಳಗಳ ಮೇಲಾದರೂ ಮೃದು ತುಪ್ಪಳವಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಪತ್ರಗಳು ಎರಡನೇ ದರ್ಜೆಯ ನಾಳಗಳು 10-15 ದೃಢವಾದ ಜೋಡಿಗಳಿರುತ್ತವೆ ಮತ್ತು ಕೊಂಚವಾಗಿ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ; ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ವೃಂತರಹಿತ ಅಥವಾ ಉಪ-ವೃಂತರಹಿತ ಹಳೆಯ ಕವಲುಗಳ ಮೇಲಿನ ಪೀಠಛತ್ರಗಳ ಗುಚ್ಛಗಳಲ್ಲಿರುತ್ತವೆ ಮತ್ತು ತುಕ್ಕು ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ.
ಕಾಯಿ /ಬೀಜ : ಬೆರ್ರಿ ಅಂಡವೃತ್ತಾಕಾರದಲ್ಲಿದ್ದು 2.5ಸೆಂ.ಮೀ.ವರೆಗಿನ ಉದ್ದ ಹೊಂದಿರುತ್ತದೆ ಮತ್ತು ಆಳವಾದ ತಲೆಕೆಳಗಾದ ಶಂಖುವಿನ ಆಕಾರದ, ಸಣ್ಣ ಸಣ್ಣ ಗಂತಿಗಳನ್ನುಳ್ಳ ಪುಷ್ಪಾವರಣದ ಬಟ್ಟಲಿನ ಮೇಲೆ ಆಸಿನವಾಗಿರುತ್ತದೆ ಮತ್ತು ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

600 ಮತ್ತು 1000 ಮೀ. ನಡುವಿನ ಮಧ್ಯಮ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಚ್ಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿ,ಪಾಲಕ್ಕಾಡು ಬೆಟ್ಟಗಳು ಮತ್ತು ದಕ್ಷಿಣ ನೀಲಗಿರಿ ಪ್ರದೇಶಗಳಲ್ಲಿ ಬೆಳೆಯುತ್ತದೆ.

ಗ್ರಂಥ ಸೂಚಿ :

Bull.Misc. Inform. Kew 130.1925;Ceylon J. Sci.(Biol.Sci.) 12:138.1977;Gamble, Fl. Madras 2:1237.1993(rep.ed.); Sasidharan, Biodiversity documentation for Kerala Flowering Plants, part 6: 399. 2004;

Top of the Page