ಮಹೋನಿಯ ಲೆಶೆನಾಲ್ಟಿಯೈ (Wall. ex Wt. & Arn.) Takeda ex Gamble - ಬರ್ಬೆರಿಡೇಸಿ

Synonym : ಬರ್ಬೆರಿಸ್ ನೇಪಾಲೆನ್ಸಿಸ್ Spreng. var. ಲೆಶೆನಾಲ್ಟಿಯೈ J.Hk. ; Thoms. ; ಬರ್ಬೆರಿಸ್ ಲೆಶೆನಾಲ್ಟಿಯೈ Wall. ex Wt. & Arn.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಪೊದೆಗಳು ಅಥವಾ ಅಂದಾಜು 6ಮೀ. ಎತ್ತರ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೆಂಡು ರೀತಿ ಇದ್ದು, ಬೂದು ಬಣ್ಣ ದ್ದು ಸೀಳಿಕಾ ಮಾದರಿಯಲ್ಲಿರುತ್ತವೆ ಹಾಗೂ ಕಚ್ಚು ಮಾಡಿದ ಜಾಗ ಹಳದಿ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕೃತಿ ಹೊಂದಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಸಂಯುಕ್ತ ಅಸಮಸಂಖ್ಯಾಗರಿ ರೂಪಿಗಳಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; 48 13ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಉಬ್ಬಿದ ಬುಡಭಾಗ ಸಮೇತವಿರುತ್ತದೆ; ಅಕ್ಷದಿಂಡು ಕೊಂಚ ಕೋನಯುಕ್ತವಾಗಿರುತ್ತದೆ. ಕಿರುಎಲೆಗಳು 5 ರಿಂದ 25 ಉದ್ದ ಜೋಡಿಯಾಗಿದ್ದು ಒಂದು ಎಲೆ ತುದಿಯಲ್ಲಿರುತ್ತದೆ. ಕಿರು ಎಲೆಗಳ ಗಾತ್ರ ಎಲೆಯ ಕೊನೆಯವರೆಗೆ ಹೆಚ್ಚುತ್ತಾ ಹೋಗುತ್ತದೆ. ಎಲೆಪತ್ರ 3 ರಿಂದ 9ಸೆಂ.ಮೀ. ಉದ್ದ, 2 ರಿಂದ 5 ಸೆಂ.ಮೀ. ಅಗಲವಿದ್ದು ತಳಭಾಗದ ಕಟ್ಟಕಡೆಯ ಕಿರುಎಲೆ ಅಂದಾಜು 1ಸೆಂ.ಮೀ. ಉದ್ದವಿರುತ್ತದೆ; ಕಿರು ಎಲೆ ಪತ್ರಗಳು ತೊಟ್ಟುರಹಿತ, ತಳಭಾಗದ ಕಟ್ಟಕಡೆಯ ಎಲೆಪತ್ರ ಬಹುಭುಜಾಕೃತಿ ಯನ್ನು ಹೊಂದಿರುವುದನ್ನು ಬಿಟ್ಟರೆ ಸಾಮಾನ್ಯವಾಗಿ ಉಳಿದ ಎಲ್ಲಾ ಪತ್ರಗಳು ಅಂಡಾಕೃತಿಯನ್ನು ಹೊಂದಿರುತ್ತದೆ. ಅಂಚು ಮತ್ತು ತುದಿ ಪ್ರಮುಖವಾಗಿ ಮುಳ್ಳುದಂತಿತವಾಗಿರುತ್ತದೆ. ಪತ್ರ ಬುಡ ಹೃದಯಾಕಾರದಲ್ಲಿರುತ್ತದೆ. ಪತ್ರಗಳು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತದೆ ಹಾಗೂ ಮೇಲ್ಭಾಗ ಹೊಳಪಾಗಿದ್ದು ತಳಭಾಗ ಮಂದವಾಗಿರುತ್ತದೆ. ಪತ್ರದ ಬುಡಭಾಗದಲ್ಲಿ 5-7 ನಾಳಗಳಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಅಂದಾಜು 30ಸೆಂ.ಮೀ. ಉದ್ದವಿದ್ದು ತುದಿಯಲ್ಲಿರುವ, ನೇರವಾದ ಮಧ್ಯಾಭಿಸರ ಮಂಜರಿ ಮಾದರಿಯಲ್ಲಿರುತ್ತವೆ; ಹೂಗಳು ಹಳದಿ ಬಣ್ಣ ಹೊಂದಿದ್ದು ಅಂದಾಜು 10ಮೀ.ಮೀ ಉದ್ದದ ತೊಟ್ಟನ್ನು ಹೊಂದಿರುತ್ತವೆ.
ಕಾಯಿ /ಬೀಜ : ಕಾಯಿಗಳು ಬೆರ್ರಿ ಮಾದರಿಯವಾಗಿದ್ದು, ಗೋಳಾಕಾರದಲ್ಲಿದ್ದು ಮಾಸಲು ಬೂದು ಛಾಯೆ ಹೊಂದಿದ್ದು ಕೆನ್ನೀಲಿ ಬಣ್ಣದಲ್ಲಿರುತ್ತವೆ ಹಾಗೂ ಒಂದರಿಂದ ಮೂರು ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1600 ರಿಂದ 2400ಮೀ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಕಾಣಸಿಗುತ್ತದೆ.

ವ್ಯಾಪನೆ :

ದಕ್ಷಿಣ ಭಾರತ; ಪಶ್ಚಿಮ ಘಟ್ಟದ ನೀಲಗಿರಿ, ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳು.

ಗ್ರಂಥ ಸೂಚಿ :

Gamble, Fl. Madras 1: 32.1997 (re.ed); Sasidharan, Biodiversity documentation for Kerala- Flowering Plants, part 6: 24. 2004.

Top of the Page