ಮಲ್ಲೋಟಸ್ ಫಿಲಿಪ್ಪೆನ್ಸಿಸ್ (Lam.) Muell.-Arg. - ಯೂಫೊರ್ಬಿಯೇಸಿ

ಕನ್ನಡದ ಪ್ರಾದೇಶಿಕ ಹೆಸರು : ಕಮಲ ಡೈ ಟ್ರೀ, ಮಂಕಿ ಫೇಸ್ ಟ್ರೀ.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಕೊರಕಲು ಮಾದರಿಯಲ್ಲಿರುತ್ತದೆ;ತೊಗಟೆ ಕಂದು ಬಣ್ಣದಲ್ಲಿದ್ದು ಸೀಳಿಕಾ ಮಾದರಿಯವು;ಕಚ್ಚು ಮಾಡಿದ ಜಾಗ ಕೆನ್ನೀಲಿ ಮಿಶ್ರಿತ ಕಂದು ಬಣ್ಣ ಹೊದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕಾರದಲ್ಲಿದ್ದು ಬೂದು ಬಣ್ಣದ ಮೃದು ತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಉದುರಿಹೋಗುತ್ತವೆ; ತೊಟ್ಟುಗಳು 1.5 ರಿಂದ 7.6 ಸೆಂ.ಮೀ.ಉದ್ದವಿದ್ದು ಎರಡೂ ತುದಿಯಲ್ಲಿ ಉಬ್ಬಿರುತ್ತವೆ ಮತ್ತು ಆಕಾರದಲ್ಲಿ ದುಂಡಾಗಿದ್ದು ಉಬ್ಬುಸಾಲಿನ ಗುರುತುಗಳನ್ನು ಹೊಂದಿರುತ್ತವೆ;ಪತ್ರಗಳು 6 - 22 X 3 – 11.5 ಸೆಂ. ಮೀ. ಗಾತ್ರದಲ್ಲಿದ್ದು,-ಅಂಡ-ಭರ್ಜಿಯ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ಚೂಪಾಗಿ ಅಥವಾ ದುಂಡಾಗಿರುತ್ತದೆ;ಅಂಚು ನಯ ಅಥವಾ ಗರಗಸ ದಂತಿತವಾಗಿರುತ್ತದೆ; ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿದ್ದು ಪತ್ರದ ಮೇಲ್ಭಾಗದಲ್ಲಿ ರೋಮರಹಿತವಾಗಿದ್ದು ತಳಭಾಗದಲ್ಲಿ ಕೆಂಪು ಬಣ್ಣದ ಅಂಟುಳ್ಳ ಮಚ್ಚೆಗಳನ್ನು ಹೊಂದಿರುತ್ತದೆ. ಪತ್ರದ ಬುಡದಲ್ಲಿ 3 ನಾಳಗಳಿರುತ್ತವೆ; ಎರಡನೇ ದರ್ಜೆಯ ನಾಳಗಳು ಅಂದಾಜು 7 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ;ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿ ತುದಿಯಲ್ಲಿನ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಗೋಳಾಕಾರದಲ್ಲಿದ್ದು ದಟ್ಟವಾದ ಕೆಂಪು ರಸಗ್ರಂಥಿಗಳನ್ನು ಹೊಂದಿರುತ್ತವೆ; ಪ್ರತಿ ಕೋಶದಲ್ಲಿ ಒಂದು ಕಪ್ಪು ಬಣ್ಣದ ಬೀಜವಿರುತ್ತದೆ.

ಜೀವಪರಿಸ್ಥಿತಿ :

1500 ಮೀ. ಎತ್ತರದವರೆಗಿನ ಪ್ರದೇಶಗಳ ನಿತ್ಯಹರಿದ್ವರ್ಣದಿಂದ ಅರೆನಿತ್ಯಹರಿದ್ವರ್ಣವರೆಗಿನ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಸಾಮಾನ್ಯವಾಗಿ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಶಿಯಾ ಮತ್ತು ಆಸ್ಟ್ರೇಲಿಯಾ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Linnaea 34: 196.1865;Gamble, Fl.Madras 2:1322.1993 (rep.ed.) ; Sasidharan, Biodiversity documentation for Kerala – Flowering plants, part 6, 423.2004;Saldanha, Fl.Karnataka 2:152.1996.

Top of the Page