ಮೆಮೆಸಿಲಾನ್ ಮ್ಯಾಕ್ರೋಕಾರ್ಪಮ್ Thw. - ಮೆಲಾಸ್ಟೊಮಟೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಸಣ್ಣಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ -ಲ್ಲಿರುತ್ತವೆ; ತೊಟ್ಟುಗಳು 0.5 -0.7ಸೆಂ.ಮೀ. ರೋಮರಹಿತವಾಗಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ; ಪತ್ರಗಳು 14 X 7.5 ಸೆಂ.ಮೀ ಗಾತ್ರ ಹೊಂದಿದ್ದು ವಿಶಾಲವಾದ ಅಂಡವೃತ್ತದ ಆಕಾರದಲ್ಲಿದ್ದು ಚೂಪಾದುದರಿಂದ ಕ್ರಮೇಣ ಚೂಪಾಗುವ ಅಥವಾ ಚೂಪಲ್ಲದ ತುದಿ, ಹಾಗೂ ಚೂಪಾದುದರಿಂದ ಉಪ-ಒಳಬಾಗಿದ ಬುಡವನ್ನು ಹೊಂದಿರುತ್ತವೆ;ಅಂಚು ನಯವಾಗಿರುತ್ತದೆ;ಪತ್ರಗಳು ರೋಮರಹಿತವಾಗಿದ್ದು ಮೇಲ್ಭಾಗದಲ್ಲಿ ಹೊಳಪನ್ನು ಹೊಂದಿರುತ್ತವೆ ಮತ್ತು ತೊಗಲ್ಲನ್ನೋಲುವ ಮಾದರಿಯಲ್ಲಿರುತ್ತದೆ; ಮಧ್ಯನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ಮತ್ತು ಅಂತರ ಅಂಚಿನ ನಾಳಗಳು ಎಲೆಗಳು ಒಣಗಿದಾಗ ಮಸುಕಾಗಿ ಕಾಣುತ್ತವೆ;ಮೂರನೇ ದರ್ಜೆಯ ನಾಳಗಳು ಅಗೋಚರ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಒತ್ತಾಗಿರುತ್ತವೆ ಅಥವಾ ನೀಳಛತ್ರ ರೂಪದ ಮಧ್ಯಾರಂಭಿ ಮಾದರಿ -ಯವುಗಳಾಗಿರುತ್ತವೆ.ವೃಂತ 0.4 ಸೆಂ.ಮೀ. ಉದ್ದವಿದ್ದು ಅಕ್ಷಾಕಂಕುಳಿನಲ್ಲಿರುತ್ತದೆ; ಹೂಗಳು ಸ್ಪಷ್ಟವಾದ ತೊಟ್ಟುಗಳನ್ನು ಹೊಂದಿರುತ್ತವೆ ಮತ್ತು ಕೆನ್ನೀಲಿ ಬಣ್ಣದವು -ಗಳಾಗಿರುತ್ತವೆ;ಪುಷ್ಪಪಾತ್ರೆ ಆಳವಾದ ಉತ್ತಗೆರೆಗಳನ್ನು ಹೊಂದಿರುತ್ತದೆ ಹಾಗೂ ಒಳಗಡೆ ಕೇಂದ್ರ ಭಾಗದಿಂದ ಹರಡುವ ರೆಕ್ಕೆಗಳ ಸಮೇತವಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು1.5 ರಿಂದ 2 ಸೆಂ.ಮೀ. ಅಡ್ಡಗಳತೆಯಲ್ಲಿದ್ದು ಗೋಳಾಕಾರದಲ್ಲಿರುತ್ತವೆ ಮತ್ತು ಶಾಶ್ವತವಾಗಿ ಉಳಿಯುವ ಪುಷ್ಪಪಾತ್ರೆಯ ಅವಶೇಷಗಳ ಸಮೇತವಿದ್ದು ಒಂದು ಬೀಜವನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ಅಂದಾಜು 600 ಮೀ.ವರೆಗಿನ ಕೆಳ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳ ಒಳಗೆ ಅಪರೂಪವಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾ; ಪಷ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಆಗಾಗ್ಗೆ ಕಂಡು ಬರುತ್ತದೆ.

ಸ್ಥಿತಿ :

ಪಶ್ಚಿಮ ಘಟ್ಟದಿಂದ ಹೊಸದಾಗಿ ದಾಖಲಿಸಲಾದ ಈ ಪ್ರಭೇದವನ್ನು ಇದಕ್ಕೂ ಮೊದಲು ಶ್ರೀಲಂಕಾದ ಬೆಟ್ಟಗಾಡು ಪ್ರದೇಶಗಳಿಂದ ದಾಖಲಿಸಲಾಗಿತ್ತು.(Bremer, 1987).

ಗ್ರಂಥ ಸೂಚಿ :

P. Zeyl. 110. 1859; Bremer in Dassanayake and Fosberg, Fl. Ceylon , 263. 1987.

Top of the Page