ಮ್ಯಾಗ್ನೋಲಿಯ ನೀಲಗಿರಿಕ Zenk. - ಮ್ಯಾಗ್ನೋಲಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಬೂದು ಬಣ್ಣ ಹೊಂದಿರುತ್ತದೆ;ಕಚ್ಚು ಮಾಡಿದ ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ಉದುರಿದ ಕಾವಿನೆಲೆಗಳ ವಲಯಾಕಾರದ ಗುರುತುಗಳ ಸಮೇತವಿರುತ್ತವೆ ಹಾಗೂ ಮೃದು ತುಪ್ಪಳದಿಂದ ಕೂಡಿರುತ್ತದೆ;ಅಗ್ರದಲ್ಲಿನ ಅಂಕುರಗಳು ರೇಷ್ಮೆಯಂತಹ ಭರ್ಜಿಯಾಕಾರದ ಕಾವಿನೆಲೆಗಳಿಂದ ಸೂಕ್ಷ್ಮವಾದ ಮೃದು ತುಪ್ಪಳದಿಂದ ಮುಚ್ಚಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 2 ಸೆಂ.ಮೀ.ವರೆಗಿನ ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತದೆ ಹಾಗೂ ಮೃದು ತುಪ್ಪಳದಿಂದ ಕೂಡಿರುತ್ತದೆ;ಪತ್ರಗಳು 5-11 x 2.2 – 4.8 ಸೆಂ.ಮೀ ಗಾತ್ರ ಹೊಂದಿದ್ದು ಅಂಡವೃತ್ತದಿಂದ ಅಂಡವೃತ್ತ –ಭರ್ಜಿ ಆಕಾರದ -ಲ್ಲಿರುತ್ತವೆ. ಪತ್ರಗಳು ಚೂಪಾದದುದರಿಂದ ಮೊಂಡಾಗ್ರವುಳ್ಳ ತುಸುವಾಗಿ ಕ್ರಮೇಣ ಚೂಪಾಗುವ ತುದಿಯನ್ನು ಹೊಂದಿರುತ್ತವೆ ಮತ್ತು ಚೂಪಾದುದರಿಂದ ಒಳಬಾಗಿದ ಬುಡ ಹೊಂದಿದ್ದು ರೋಮರಹಿತವಾಗಿರುತ್ತವೆ; ಅಂಚು ನಯವಾಗಿ -ರುತ್ತದೆ; ಮೇಲ್ಮೈ ಉಪತೊಗಲನ್ನೋಲುವ ಮಾದರಿಯಲ್ಲಿರುತ್ತದೆ ಮತ್ತು ತಳಭಾಗದಲ್ಲಿ ಮಾಸಿದ ಬಿಳಿ ಬೂದು ಹಸಿರು ಬಣ್ಣ ಹೊಂದಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 10 ರಿಂದ 13 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಸನಿಹವಾಗಿದ್ದು ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ದೊಡ್ಡದಾಗಿದ್ದು, ಬಿಳಿ ಅಥವಾ ಕೆನೆ ಬಣ್ಣ ಹೊಂದಿದ್ದು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಕಾಯಿಗಳು ಫಾಲಿಕಲ್ ಮಾದರಿಯಲ್ಲಿದ್ದು ಗಂತಿಗಳನ್ನು ಹೊಂದಿರುತ್ತವೆ ಮತ್ತು ಕದಿರುಮಂಜರಿಯ ರೀತಿ ವ್ಯವಸ್ಥಿತವಾಗಿರುತ್ತವೆ;ಫಾಲಿಕಲ್ಗಳು ಬೆನ್ನಿನ ಬಳಿಯಲ್ಲಿ ಬಿರಿಯುತ್ತವೆ;ಬೀಜ 1 ದ್ದು ಕಡುಗೆಂಪು ಬಣ್ಣ ಹೊಂದಿರುತ್ತದೆ.

ಜೀವಪರಿಸ್ಥಿತಿ :

1600 ಮತ್ತು 2400 ಮೀ. ಎತ್ತರದವರೆಗಿನ ಉನ್ನತ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈ,ಮೇಗಮಲೈ, ಆಣ್ಣಾಮಲೈ,ಪಳನಿ, ನೀಲಗಿರಿ ಮತ್ತು ಬಾಬಬುಡನ್ ಬೆಟ್ಟ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Zenk., Pl.Ind. 21.t.20.1835;Gamble,Fl.Madras 1:9. 1993(rep.ed.); Saldanha, Fl. Karnataka 1:39.1984; Sasidharan, Biodiversity documentation for Kerala Plants, part 6, 15.2004.

Top of the Page