ಮಿಟ್ರೆಫೋರ ಗ್ರಾಂಡಿಫ್ಲೋರ Bedd. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಸೂಕ್ಷ್ಮವಾದ ತುಕ್ಕು ವರ್ಣದ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡಣೆಯಲ್ಲಿದ್ದು, ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆತೊಟ್ಟು 0.6 ರಿಂದ 1.3ಸೆಂ.ಮೀ. ಉದ್ದವಾಗಿದ್ದು ಕಾಲುವೆಗೆರೆ ಸಹಿತವಾಗಿದ್ದು ತುಕ್ಕುವರ್ಣದ ಮೃದು ತುಪ್ಪಳದಿಂದ ಕೂಡಿರುತ್ತವೆ. ಎಲೆಪತ್ರ 8-16 × 3.5-6.7 ಸೆಂ.ಮೀ. ಗಾತ್ರ ಹೊಂದಿದ್ದು ಅಂಡಾಕಾರದದಿಂದ ಅಂಡವೃತ್ತಾಕಾರ ಹೊಂದಿರುತ್ತವೆ. ಮೊಂಡಾದ ಅಗ್ರ ಭಾಗವನ್ನು ಹೊಂದಿದ ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ಹಿಡಿದು ಗುಂಡಾದ ಮಾದರಿಯುಳ್ಳ ಬುಡವನ್ನು ಹೊಂದಿರುವ ಎಲೆಪತ್ರ ನಯವಾದ ಅಂಚು, ತೊಗಲು ಮಾದರಿಯ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತೆದೆ. ಪತ್ರಗಳ ಮೇಲ್ಭಾಗ ಕಡುಹಸಿರಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಕ್ಷಾಕಂಕುಳಿನಲ್ಲಿ ರೋಮಸಹಿತವಾದ ಸಹಜೀವಿ ಗೂಡುಗಳಿರುತ್ತವೆ. ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿದ್ದು ಪ್ರಮುಖವಾಗಿ ಕಾಣುವಂತಹ ಹೂವುಗಳಾಗಿರುತ್ತವೆ; ತೃತೀಯ ಹಾಗೂ ಹೆಚ್ಚಿನ ದರ್ಜೆಯ ನಾಳಗಳು ಜಾಲಬಂಧ ನಾಳವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಒಂಟಿಯಾಗಿ ಅಥವಾ 2 - 3 ಹೂಗಳು ಎಲೆಗೆ ಅಭಿಮುಖಿಯಾಗಿ ಸರಳ ಮಧ್ಯಾರಂಭಿ ಪುಷ್ಪ ಮಂಜರಿಯಲ್ಲಿರುತ್ತವೆ. ಹೂತೊಟ್ಟು ಸುಮಾರು 1 ಸೆಂ.ಮೀ. ಉದ್ದವಿದ್ದು ಮೃದು ತುಪ್ಪಳ ಸಹಿತವಿರುತ್ತದೆ. ಪುಷ್ಪದ ದಳಗಳು ಬಿಳಿಯಿಂದ ಹಳದಿಬಣ್ಣದವುಗಳಾಗಿರುತ್ತವೆ.
ಕಾಯಿ /ಬೀಜ : ಒಂದರಿಂದ ಎರಡು ಬೀಜಗಳನ್ನೊಳಗೊಂಡಿದ್ದು ಗೋಳಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ ಅಲ್ಲದೆ ಸಾಮೂಹಿಕವಾಗಿರುತ್ತವೆ.

ಜೀವಪರಿಸ್ಥಿತಿ :

ಸಮುದ್ರಮಟ್ಟದಿಂದ 600 ಮೀ ಎತ್ತರದವರೆಗಿನ ಕಡಿಮೆ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕೆಳಛಾವಣಿ ಮರಗಳಾಗಿ ಈ ಪ್ರಭೇದ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮಘಟ್ಟಗಳಿಗೆ ಸೀಮತವಾದ ಈ ಸಸ್ಯ ಅಪರೂಪವಾಗಿ ದಕ್ಷಿಣ ಹಾಗೂ ಮಧ್ಯ ಸಹ್ಯಾದ್ರಿಯ ಪ್ರದೇಶಗಳಲ್ಲಿ ಕಂಡು ಬರುತ್ತವೆ.

ಸ್ಥಿತಿ :

ದುರ್ಬಲಸ್ಥಿತಿ (IUCN, 2000)

ಗ್ರಂಥ ಸೂಚಿ :

Beddome, Icon. Pl. Ind. Or. 101.1868-1874; Gamble, Fl. Madras 1: 19. 1997 (re. ed); Sasidharan, Biodiversity documentation for Kerala- Flowering Plants, part 6: 18. 2004; Saldanha, Fl. Karnataka 1: 47. 1996.

Top of the Page