ಪ್ಯಾರಾಕ್ರೋಟಾನ್ ಪೆಂಡ್ಯುಲಸ್ (Hassk.) Miq. ssp. ಜೇಲಾನಿಕಸ್ (Thw.) Balakr.& Chakrab. - ಯೂಫೊರ್ಬಿಯೇಸಿ

Synonym : ಫಾರೆನ್ಹೇಸಿಯ ಜೇಲಾನಿಕಸ್ (Thw.) A. Shaw; ಆಸ್ಟೋಡೆಸ್ ಜೇಲಾನಿಕಸ್ (Thw.) Muell.-Arg.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢ ಹಾಗೂ ದುಂಡಾಗಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಜಿನುಗು ದ್ರವ : ಕಿರುಕೊಂಬೆಗಳ ಕತ್ತರಿಸಿದ ತುದಿಯಲ್ಲಿ ಕೆಂಪಾದ ಜಿನುಗು ದ್ರವವಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಸಾಮಾನ್ಯವಾಗಿ ಕುಡಿಕೊಂಬೆಗಳ ತುದಿಯಲ್ಲಿರುತ್ತವೆ. ತೊಟ್ಟುಗಳು 4 ರಿಂದ 10 ಸೆಂ.ಮೀ.ಉದ್ದವಿದ್ದು ದುಂಡಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ ಹಾಗೂ ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ; ಪತ್ರದ ಮೇಲ್ಭಾಗದಲ್ಲಿ ತೊಟ್ಟು ಮತ್ತು ಪತ್ರ ಸಂಧಿಸುವಲ್ಲಿ ಒಂದು ಜೋಡಿ ರಸಗ್ರಂಥಿಗಳಿರುತ್ತವೆ;ಪತ್ರಗಳು 15-32 X 4-11 ಸೆಂ.ಮೀ. ಗಾತ್ರದಲ್ಲಿದ್ದು,ಸಾಮಾನ್ಯವಾಗಿ ಸಂಕುಚಿತ ಅಂಡವೃತ್ತದಿಂದ ಬುಗುರಿ-ಭರ್ಜಿಯ ಆಕಾರ ಹೊಂದಿರುತ್ತವೆ; ಪತ್ರಗಳು ಕ್ರಮೇಣ ಚೂಪಾಗುವ ತುದಿ ಹೊಂದಿರುತ್ತವೆ ,ಬುಡ ಬೆಣೆಯಾಕಾರದ ಮಾದರಿಯಲ್ಲಿರುತ್ತದೆ; ಎಲೆಯ ಗರಗಸ ದಂತಿತವಾಗಿರುತ್ತದೆ; ಮೇಲ್ಮೈ ತೊಗಲನ್ನೋಲುವ ಮಾದರಿಯದಾಗಿದ್ದು ರೋಮರಹಿತವಾಗಿರುತ್ತದೆ ಹಾಗೂ ಒಣಗಿದಾಗ ಕಂದು ಬಣ್ಣ ಹೊಂದಿರುತ್ತದೆ;ಪತ್ರದ ಮೇಲ್ಭಾಗದಲ್ಲಿ ಮಧ್ಯ ನಾಳ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿದ್ದು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿ ಜೋತಾಡುವ ಮಾದರಿಯ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತದೆ.
ಕಾಯಿ /ಬೀಜ : ಸಂಪುಟ ಫಲಗಳು ಗೋಳಾಕಾರದಲ್ಲಿದ್ದು, 3 ಉಬ್ಬುಗಳ ಸಮೇತವಿರುತ್ತವೆ ಹಾಗೂ ಕಂದು ಬಣ್ಣದ ದಟ್ಟ ಮೃದು ತುಪ್ಪಳವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

150 ಮತ್ತು 1800 ಮೀ. ಎತ್ತರದ ನಡುವಿನ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಿಂದ ಉಪ- ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Kew Bull. 48:719.1993; Gamble, Fl.Madras 2:1336.1993 (rep.ed.) ; Sasidharan, Biodiversity documentation for Kerala – Flowering plants, part 6, 425.2004;Saldanha, Fl.Karnataka 2:142.1996.

Top of the Page