ಸೆಮೆಕಾರ್ಪಸ್ ಆರಿಕ್ಯುಲೇಟ Bedd. - ಅನಕಾರ್ಡಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ ಎತ್ತರದವರೆಗೂ ಬೆಳೆಯುವ ಮಹಾವೃಕ್ಷಗಳು
ಕಾಂಡ ಮತ್ತು ತೊಗಟೆ : ತೊಗಟೆ ನಯವಾದ ಮೇಲ್ಮೈ ಹೊಂದಿದ್ದು ಕಂದು ಬಣ್ಣದ ಕಚ್ಚುಗಳನ್ನು ಹೊಂದಿರುತ್ತದೆ
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕೊಂಬೆಗಳು ಸೂಕ್ಷ್ಮವಾಗಿ ಹರಡಿರುವ ಮೃದು ತುಪ್ಪಳವನ್ನು ಹೊಂದಿರುತ್ತದೆ.
ಜಿನುಗು ದ್ರವ : ಜಿನುಗುದ್ರವ ಜಲರೂಪಿಯಾಗಿದ್ದು ಕ್ರಮೇಣ ಕಪ್ಪುಬಣ್ಣಕ್ಕೆ ತಿರುಗುತ್ತದೆ.
ಎಲೆಗಳು : ಎಲೆಗಳು ಕುಡಿ ಕೊಂಬೆಗಳ ತುದಿಯಲ್ಲಿ ಗುಂಪಾಗಿದ್ದು, ಸರಳ ರೀತಿಯವಾಗಿದ್ದು ಪರ್ಯಾಯ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಎಲೆ ತೊಟ್ಟುಗಳು 0.2ರಿಂದ 0.7 ಸೆ.ಮೀ. ಉದ್ದ ಹೊಂದಿದ್ದು, ರೋಮರಹಿತ ಹಾಗೂ ದೃಢವಾಗಿದ್ದು ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ. ಎಲೆಪತ್ರ 8-28 × 2.2-7 ಸೆ.ಮೀ. ಗಾತ್ರ, ಬುಗುರಿ-ಈಟಿ ಆಕಾರ ಹೊಂದಿದ್ದು ಮೊಂಡು ತುದಿಉಳ್ಳ ಕ್ರಮೇಣ ಚೂಪಾಗುವ ತುದಿ, ಕಿವಿಯಾಕಾರದ ಚಾಚುಳ್ಳ ಬುಡವನ್ನು ಹೊಂದಿರುತ್ತದೆ.; ಪತ್ರದ ಮೇಲ್ಮೈ ಉಪ-ತೊಗಲಿನ ಮಾದರಿಯಲ್ಲಿರುತ್ತದೆ; ಮಧ್ಯ ನಾಳಗಳು ಮತ್ತು ಜಾಲಬಂಧವಿನ್ಯಾಸದಲ್ಲಿನ ನಾಳಗಳು ಎಲೆ ಪತ್ರದ ಮೇಲ್ಭಾಗ ಮತ್ತು ತಳಭಾಗದಲ್ಲಿ ಉಬ್ಬಿಕೊಂಡಿರುತ್ತವೆ. ಎರಡನೇ ದರ್ಜೆಯ ನಾಳಗಳು 7 ರಿಂದ 18 ಜೋಡಿಗಳಿದ್ದು ಬಹುಮಟ್ಟಿಗೆ ನೇರವಾಗಿದ್ದು ಪತ್ರದ ಅಂಚಿನ ಬಳಿ ತಿರುವಿಕೊಂಡಿದ್ದು ಮಿತವಾದ ಕೋನದಲ್ಲಿರುತ್ತದೆ. ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಪುಷ್ಪ 7 ರಿಂದ 15 ಸೆ.ಮೀ ಉದ್ದವಿರುತ್ತದೆ. ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವೆಲೊಡೆವ ಅನಿಯತ ಮಧ್ಯಾಭಿಸಕರ ಪುಷ್ಪ ಮಂಜರಿಗಳು ಏಕಲಿಂಗಿ ಪುಷ್ಪಗಳನ್ನೊಳಗೊಂಡಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯಲ್ಲಿದ್ದು ಒಂದು ಬೀಜವನ್ನು ಹೊಂದಿರುತ್ತವೆ. ಆಕಾರದಲ್ಲಿ ಓರೆಯಾದ ಬುಗುರಿಯನ್ನು ಹೋಲುವ ಕಾಯಿಗಳು ತೆಳಕೆಳಗಾದ ಹೈಪೋಕಾರ್ಪ್ ಮೇಲೆ ಆಸೀನವಾಗಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ಸಮುದ್ರಮಟ್ಟಕ್ಕಿಂತ 900ಮೀ ಎತ್ತರದವರೆಗೆ ಇರುವ ಕಡಿಮೆ ಎತ್ತರ ಪ್ರದೇಶಗಳ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾಗಿರುವ ಈ ಪ್ರಬೇಧ ದಕ್ಷಿಣ ಸಹ್ಯಾದ್ರಿಯಲ್ಲಿ ಸಾಮಾನ್ಯವಾಗಿಯೂ ಮಧ್ಯಸಹ್ಯಾದ್ರಿಯಲ್ಲಿನ ಕೊಡಗು ಜಿಲ್ಲೆಯಲ್ಲಿ ಅಪರೂಪವಾಗಿಯೂ ಕಾಣಸಿಗುತ್ತದೆ.

ಸ್ಥಿತಿ :

ಅಳಿವಿನಂಚಿನ ಅಲ್ಪ ಅಪಾಯ ಸಂಭವ ಸ್ಥಿತಿಯಲ್ಲಿರುವ ಈ ಪ್ರಬೇಧ ನಶಿಸಿಹೋಗು ಆತಂಕಕಾರಿ ಸ್ಥಿತಿಯಲ್ಲಿಯೂ ಇದೆ. (IUCN 2000)

ಗ್ರಂಥ ಸೂಚಿ :

Fl. Sylv. 2: 232. 1870; Gamble, Fl. Madras 1: 267. 1997 (re. ed); Sasidharan, Biodiversity documentation for Kerala- Flowering Plants, part 6: 111. 2004; Keshava Murthy and Yoganarasimhan, Fl. Coorg (Kodagu) 126. 1990.

Top of the Page