ಸೊಲೆನೊಕಾರ್ಪಸ್ ಇಂಡಿಕ Wt.& Arn. - ಅನಕಾರ್ಡಿಯೇಸಿ

Synonym : ಸ್ಪಾಂಡಿಯಾಸ್ ಇಂಡಿಕ (Wt. & Arn.) Airy Shaw & Forman

ಕನ್ನಡದ ಪ್ರಾದೇಶಿಕ ಹೆಸರು : ದೊಡ್ಡೆಲೆ ಹೊಲೆಗಾರ, ಹೆಡಗಲು

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಸಣ್ಣದಾದ ಎಲೆಯುದುರುವ, 10 ಮೀ ಎತ್ತರದವರೆಗೂ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆಯ ಮೇಲ್ಮೈ ನಯವಾಗಿದ್ದು ಬೂದು ಮಿಶ್ರಿತ ಹಸಿರು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಬೆಂಡು ರೂಪದ ತೊಗಟೆ ಹೊಂದಿದ್ದು ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಅಸಮ ಸಂಖ್ಯಾ ಗರಿರೂಪ ಸಂಯುಕ್ತ ಮಾದರಿಯಲ್ಲಿದ್ದು ಕುಡಿಕೊಂಬೆಗಳ ತುದಿಗಳಲ್ಲಿ ಗುಂಪಾಗಿರುತ್ತವೆ. ಸಂಯುಕ್ತ ಎಲೆಗಳ ಅಕ್ಷದಿಂಡು 15 ರಿಂದ 30ಸೆಂ.ಮೀ. ಉದ್ದವಿದ್ದು, ಉಬ್ಬು ಸಾಲಿನ ಗುರುತುಗಳನ್ನು ಹೊಂದಿರುತ್ತವೆ. ಅಕ್ಷಾದಿಂಡಿನ ಬುಡ ಉಬ್ಬಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ. ಕಿರುಎಲೆಗಳು ಅಭಿಮುಖಿಗಳಾಗಿದ್ದು, 3 ರಿಂದ 7 ಜೋಡಿಗಳಿದ್ದು, ಒಂದು ಕಿರು ಎಲೆ ಅಗ್ರಸ್ಥಾನದಲ್ಲಿರುತ್ತದೆ. ಕಿರು ಎಲೆಗಳ ತೊಟ್ಟು 0.2 ಸೆಂ.ಮೀ. ವರೆಗಿನವರೆಗೂ ಉದ್ದವಿದ್ದು ಕಿರುಎಲೆಗಳ ಪತ್ರ 3 - 8 × 1.4 - 3ಸೆಂ.ಮೀ. ಗಾತ್ರದಲ್ಲಿರುತ್ತದೆ; ಕಿರುಎಲೆಗಳ ಪತ್ರಗಳು ಇಕ್ಕಟ್ಟಾದ ಚತುರಸ್ರಾಕಾರದಲ್ಲಿ ಕೆಲವೊಮ್ಮೆ ಅಂಡ-ಚತುರಸ್ರಾಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ತುದಿ, ಅಸಮರೂಪಿ ಗುಂಡಾಕಾರದ ಬುಡ, ಆಳವಿಲ್ಲದ ಸೂಕ್ಷ್ಮಾದಂತಾಕೃತಿ ಅಂಚು, ತೊಗಲಿನಂತಹ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ. ಮಧ್ಯನಾಳ ಪತ್ರಗಳ ಮೇಲ್ಭಾಗದಲ್ಲಿ ಉಬ್ಬಿರುತ್ತದಲ್ಲದೆ ಅಂತರ-ಅಂಚಿನ ನಾಳಗಳ ಸಮೇತವಾಗಿರುತ್ತದೆ. ಎರಡನೇ ದರ್ಜೆಯ ನಾಳಗಳು 8 ರಿಂದ 10 ಇದ್ದು, ತೃತೀಯ ದರ್ಜೆಯ ನಾಳಗಳು ಎಲೆಯ ಅಕ್ಷದ ದಿಕ್ಕಿಗಿರುತ್ತದೆ.
ಪುಷ್ಪಮಂಜರಿ/ಹೂಗಳು : ಹೂಗಳು ಸುವಾಸನಾಯುಕ್ತ, ದ್ವಿಲಿಂಗಿ ಹಾಗೂ ಬಿಳಿ ಬಣ್ಣದಾಗಿದ್ದು ತುದಿಯಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯವು, 0.8 × 0.4 ಸೆಂ.ಮೀ. ಅಳತೆಯ ಸಣ್ಣ ಗಾತ್ರದವು ಹಾಗೂ ಒಂದು ಬೀಜವನ್ನೊಳಗೊಂಡಿದ್ದು ದೀರ್ಘ ಚತುರಸ್ರಾಕಾರದಲ್ಲಿರುತ್ತವೆ.

ಜೀವಪರಿಸ್ಥಿತಿ :

ಸಮುದ್ರ ಮಟ್ಟಕ್ಕಿಂತ 1000ಮೀ ಎತ್ತರ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಮತ್ತು ತೇವಾಂಶವುಳ್ಳ ಎಲೆಯುದುರು ಕಾಡುಗಳಲ್ಲಿ ನೀರಿನ ಝರಿಗಳ ಬಳಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಈ ಪ್ರಭೇದ ಸೀಮಿತ; ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ಕಾಣಸಿಗುತ್ತದೆ.

ಗ್ರಂಥ ಸೂಚಿ :

Prodr. 1: 172. 1834; Gamble, Fl. Madras 1: 262.1997 (re.ed); Sasidharan, Biodiversity documentation for Kerala- Flowering Plants, part 6: 113. 2004; Saldanha, Fl. Karnataka 2: 209. 1996

Top of the Page