ಟರ್ಮಿನೇಲಿಯ ಬೆಲ್ಲಿರಿಕ (Gaertn.) Roxb. - ಕಾಂಬ್ರೆಟೇಸಿ

Synonym : ಮೈರೋಬಲಾನಸ್ ಬೆಲ್ಲಿರಿಕ Gaertn.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 40 ಮೀ. ಎತ್ತರದವರೆಗೆ ಬೆಳೆಯುವ, ಆನಿಕೆಯುಳ್ಳ, ಎಲೆಯುದುರುವ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬಿಳಿ ಬಣ್ಣ ಹೊಂದಿದ್ದು ಉದ್ದುದ್ದವಾಗಿ ಬಿರಿದ ಮಾದರಿಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ಎಲೆ ತೊಟ್ಟುಗಳು 3 ರಿಂದ 10 ಸೆಂ.ಮೀ. ಉದ್ದವಿದ್ದು ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ ಹಾಗೂ ಮಧ್ಯಭಾಗಕ್ಕಿಂತ ಕೊಂಚ ಮೇಲೆ ಜೋಡಿ ರಸಗ್ರಂಥಿಗಳನ್ನು ಹೊಂದಿರುತ್ತವೆ, ಕೆಲವು ವೇಳೆ ಜೋಡಿ ರಸಗ್ರಂಥಿಗಳು ಅಸ್ಪಷ್ಟವಾಗಿರುತ್ತವೆ; ಪತ್ರಗಳು 8-20 X 4-14 ಸೆಂ.ಮೀ. ಗಾತ್ರ ಹೊಂದಿದ್ದು ವಿಶಾಲವಾದ ಅಂಡವೃತ್ತಾಕಾರ ಅಥವಾ ವಿಶಾಲವಾದ ಬುಗುರಿಯಾಕಾರದಲ್ಲಿದ್ದು ,ಚೂಪಾಗಿರುವುದರಿಂದ ಹಿಡಿದು ಕಿರಿದಾದ ಹಾಗೂ ಕ್ರಮೇಣವಾಗಿ ಚೂಪಾಗುವ ಮಾದರಿಯ ತುದಿ, ಬೆಣೆಯಾಕಾರದ ಬುಡವನ್ನು ಹೊಂದಿರುತ್ತವೆ ; ಪತ್ರಗಳು ತೊಗಲನ್ನೋಲುವ ಮೇಲ್ಮೈ ಇದ್ದು ಎಳೆಯದಾಗಿದ್ದಾಗ ಎರಡೂ ಬದಿಯಲ್ಲಿ ಮೃದುತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗ ದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿದ್ದು ಕ್ರಮೇಣವಾಗಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಕದಿರುಮಂಜರಿ ಮಾದರಿಯವು; ಹೂಗಳು ತೊಟ್ಟುರಹಿತವಾಗಿದ್ದು ಕೆನೆಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಕಾಯಿಗಳು ಡ್ರೂಪ್ ಮಾದರಿಯಲ್ಲಿದ್ದು, 5 ಸೆಂ.ಮೀ ಅಡ್ಡಗಲದ ಅಳತೆ ಮತ್ತು ಗೋಳಾಕಾರ ಅಥವಾ ಅಂಡಾಕಾರ ಹೊಂದಿರುತ್ತದೆ ಹಾಗೂ 5 ಏಣುಗಳುಳ್ಳ ಮೇಲ್ಮೈ ಸಮೇತವಾಗಿರುತ್ತವೆ; ಬೀಜಗಳ ಸಂಖ್ಯೆ ಒಂದು.

ಜೀವಪರಿಸ್ಥಿತಿ :

1400 ಮೀ.ಎತ್ತರದವರೆಗಿನ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಮತ್ತು ಅರೆನಿತ್ಯಹರಿದ್ವರ್ಣ ಕಾಡುಗಳ ತೆರೆದ ಭಾಗಗಳಲ್ಲಿ ಹೊರಹೊಮ್ಮುವ ಪ್ರಭೇದ.

ವ್ಯಾಪನೆ :

ಇಂಡೋಮಲೇಶಿಯಾ ; ಪಶ್ಚಿಮ ಘಟ್ಟದ ಎಲ್ಲಾ ಭಾಗಗಳು

ಗ್ರಂಥ ಸೂಚಿ :

Roxborourgh, Pl. cor. 198.1805;Gamble,Fl.Madras 1:463.1997(re.ed.); Sasidharan, Biodiversity documentation for Kerala- Flowering Plants, part 6:171.2004; Cooke, Fl. Bombay 1: 478.1902; Saldanha, Fl.Karnataka 2:50.1996

Top of the Page